Carrot Halwa Recipe In Kannada-ಕ್ಯಾರೆಟ್ ಹಲ್ವ
Carrot Halwa Recipe In Kannada-ಕ್ಯಾರೆಟ್ ಹಲ್ವ
ಕ್ಯಾರಟ್ ಹಲ್ವಾ(Carrot Halwa) ಮಾಡಲು ಬೇಕಾಗುವ ಪದಾರ್ಥಗಳು:
ಕಾಲು ಕೆ.ಜಿ. ಸಕ್ಕರೆ, | ಅರ್ಧ ಕೆ.ಜಿ. ಕ್ಯಾರೆಟ್, | ಅರ್ಧ ಲೀಟರ್ ಹಾಲು, |
100 ಗ್ರಾಂ ತುಪ್ಪ, | ದ್ರಾಕ್ಷಿ-ಗೋಡಂಬಿ 25ಗ್ರಾಂ, | ಯಾಲಕ್ಕಿ 8. |
ಮಾಡುವ ವಿಧಾನ:
ಕ್ಯಾರೆಟನ್ನು ಚೆನ್ನಾಗಿ ತೊಳೆದುಕೊಂಡು ಶುಚಿ ಮಾಡಿಕೊಳ್ಳಿ.
ಆಮೇಲೆ ಕ್ಯಾರೆಟನ್ನು ಕೊಬ್ಬರಿ ತುರಿಯುವ ಮಣೆಯಲ್ಲಿ ತುರಿದುಕೊಂಡು
ಹಾಲಿಗೆ ಸೇರಿಸಿ ಒಲೆಯ ಮೇಲಿಡಿ.
ಕ್ಯಾರೆಟ್ ಬೆಂದಮೇಲೆ ತುಪ್ಪ, ಸಕ್ಕರೆ,
ತುಪ್ಪದಲ್ಲಿ ಕರಿದ ಗೋಡಂಬಿ-ದ್ರಾಕ್ಷಿ, ಯಾಲಕ್ಕಿ ಪುಡಿ ಎಲ್ಲವನ್ನೂ ಹಾಕಿ
ಚೆನ್ನಾಗಿ ಮಿಶ್ರಣ ಮಾಡಿ, ಕ್ಯಾರೆಟ್ ಹಲ್ವ ಸ್ವಲ್ಪ ಗಟ್ಟಿಯಾದ ಕೂಡಲೇ
ಕೆಳಗಿಳಿಸಿರಿ.