Gastric Problem Home Remedies in Kannada – ಗ್ಯಾಸ್ಟ್ರಿಕ್ ಸಮಸ್ಯಗೆ ಸಿಂಪಲ್ ಮನೆ ಮದ್ದು -Kannada Health Tips

Gastric Problem Home Remedies in Kannada – ಗ್ಯಾಸ್ಟ್ರಿಕ್ ಸಮಸ್ಯಗೆ ಸಿಂಪಲ್ ಮನೆ ಮದ್ದುಗಳು  

ಹೊಟ್ಟೆಯಲ್ಲಿ ಅಜೀರ್ಣ ಕಾಣಿಸಿಕೊಳ್ಳುವದು ನಾವು ತಿನ್ನೋ ಆಹಾರ ಸರಿಯಾಗಿಲ್ಲದಿರುವದರಿಂದ ಹಾಗೂ  ತುಂಬಾ ಅವಸರ  ಅವಸರ ದಿಂದ ಊಟ ಮಾಡುವದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ ,ಈ ಸಮಸ್ಯೆ ಇಂದಾಗಿ ಹೊಟ್ಟೆಯಲ್ಲಿ ಹಾಗು ಎದೆಯಲ್ಲಿ  ಉರಿ ಉಂಟಾಗುತ್ತದೆ .ಮಾರುಕಟ್ಟೆಯಲ್ಲಿ ಹಲವಾರು ಔಷದಿಗಳು ಲಭ್ಯವಿವೆ ಇವುಗಳನ್ನು ಸೇವನೆ ಮಾಡುವದರಿಂದ ಕೇವಲ ಕೆಲವು ಸಮಯ ಉಪಶಮನ ಸಿಗಬಹುದು , ಇವುಗಳ ಸೇವನೆ ಇಂದ ಸೈಡ್ ಎಫೆಕ್ಟ್ ಆಗುವ ಎಲ್ಲ ಸಾಧ್ಯತೆಗಳು ಇರುತ್ತದೆ,How to cure gastric problem permanently ಆದ್ದರಿಂದ ಮನೆಯಲ್ಲೇ ಈ ಕೆಳಗೆ ಕೊಟ್ಟಿರುವ ಮನೆ ಮದ್ದುಗಳನ್ನು ಸೇವಿಸುವದರಿಂದ ಗ್ಯಾಸ್ಟ್ರಿಕ್ ಸಮಸ್ಸೆ ಕ್ರಮೇಣ ದೂರವಾಗುತ್ತದೆ Acidity in kannada….


Home Remedies for Gastric Problem in Kannada – ಗ್ಯಾಸ್ಟ್ರಿಕ್ ಸಮಸ್ಯಗೆ ಸಿಂಪಲ್ ಮನೆ ಮದ್ದುಗಳು ಇಲ್ಲಿವೆ ಇವುಗಳ ಸೇವನೆ ಇಂದ ಅಜೀರ್ಣ ಸಮಸ್ಯೆ ಕ್ರಮೇಣ ದೂರವಾಗುತ್ತದೆ …..

Acidity Remedies in kannada ಮನೆ ಮದ್ದುಗಳು :Kannada Website

  • ದಿನವೂ ಮಜ್ಜಿಗೆಗೆ ಉಪ್ಪು ಬೆರೆಸಿ ಕುಡಿಯುತ್ತಿದ್ದರೆ ಅಜೀರ್ಣ ನಿವಾರಣೆ ಆಗುವುದು.
  • ಪ್ರತಿ ದಿನವೂ ಊಟ ಆದ ನಂತರ ಒಂದು ಚೂರು ಶುಂಠಿ ಆಗಿದು , ಚಪ್ಪರಿಸುವ ಅಭ್ಯಾಸ ಮಾಡಿದರೆ ಅಜೀರ್ಣ ಹಾಗೂ ಹೊಟ್ಟೆ ಹುಣ್ಣು ವಾಸಿಆಗುವುದು,
  • ದಿನವೂ ಜೇನುತುಪ್ಪವನ್ನು ಗೊತ್ತಾದ ಪ್ರಮಾಣದಲ್ಲಿ ಸೇವಿಸುತ್ತಿದ್ದರೆ ಅಜೀರ್ಣ ರೋಗ ದೂರ ಆಗುವುದು.
  • ಉಪ್ಪು ಮತ್ತು ಜೇನುತುಪ್ಪವನ್ನು ನಂಜಿಕೊಂಡು,  ಮಾವಿನ ಕಾಯಿಯನ್ನು ತಿನ್ನುತ್ತಿದ್ದರೆ ಅಜೀರ್ಣ ಇರದು.
  • ಬಲಿತ ಮಾವಿನ ಕಾಯಿಗಳ ಉಪ್ಪಿನಕಾಯಿಯನ್ನು ಮಜ್ಜಿಗೆ ಅನ್ನದ ಜೊತೆ ಉಪಯೋಗಿಸಿದರೆ ಜೀರ್ಣಶಕ್ತಿ ಹೆಚ್ಚುವುದಲ್ಲದ ಹಸಿವೂ ಸಹ ಅಧಿಕ ಆಗುವುದು,
  • ಬೆಳ್ಳುಳ್ಳಿಯ ಬಳಕೆಯಿಂದಲೂ ಅಜೀರ್ಣ ರೋಗದಿಂದ ಪಾರಾಗಬಹುದು. ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
  • ಬಾಳೆ ಹಣ್ಣನ್ನು ಊಟ ಆದ ನಂತರ ದಿನವೂ ಸೇವಿಸುವುದರಿಂದ ಅಜೀರ್ಣ ರೋಗ ಪರಾರಿ ಆಗುವುದು.
  • ಊಟ ಆದ ನಂತರ ದಿನವೂ ಫರಂಗಿ ಹಣ್ಣನ್ನು ಸೇವಿಸುವುದರಿಂದಲೂ ಅಜೀರ್ಣ ರೋಗದಿಂದ ಪಾರಾಗಬಹುದು.
  • ಕಿರಿ ನೆಲ್ಲಿಕಾಯಿಯನ್ನು ಉಪ್ಪಿನೊಂದಿಗೆ ನಿಗದಿತ ಪ್ರಮಾಣದಲ್ಲಿ ತಿನ್ನುವುದರಿಂದ ಅಜೀರ್ಣ ಬಾಧೆ ಇರುವುದಿಲ್ಲ.
  • ಆಗಾಗ ನುಗ್ಗೇಕಾಯಿಯನ್ನು ಸೇವಿಸುತ್ತಿರುವುದರಿಂದ ಪಚನಶಕ್ತಿ ಹೆಚ್ಚುವುದು. ಆರೋಗ್ಯವೂ ವೃದ್ಧಿಸುವುದು.
  •  ಬಿಳಿಯ ದ್ರಾಕ್ಷಿ ಹಣ್ಣು ಅಜೀರ್ಣ ಹಾಗೂ ಹುಳಿ ತೇಗಿಗೆ ರಾಮಬಾಣ.
  • ಅನ್ನದ ಗಂಜಿಗೆ ಉಪ್ಪು ಬೆರೆಸಿ ತಿನ್ನುವುದರಿಂದ ಜೀರ್ಣಶಕ್ತಿ ವೃದ್ಧಿಸುವುದರ ಜೊತೆಗೆ ಶರೀರದ ಲವಲವಿಕೆ ಹಚ್ಚುವದು.
  • ಹಸಿ ಅವರೆಕಾಳನ್ನು ಚೆನ್ನಾಗಿ ಬೇಯಿಸಿ, ಹಲ್ಲುಗಳಿಂದ ಚೆನ್ನಾಗಿ ಅಗಿದು ತಿಂದರೆ ಜೀರ್ಣಶಕ್ತಿ ದ್ವಿಗುಣಗೊಳ್ಳುವುದು.
  • ಏಲಕ್ಕಿ ಕಾಳುಗಳನ್ನು ಚೆನ್ನಾಗಿ ಅಗಿದು ತಿಂದರೆ ಜೀರ್ಣಶಕ್ತಿ ಹೆಚ್ಚುವುದು.
  • ಓಮಿನ ಕಾಳುಗಳನ್ನು ಊಟವಾದ ನಂತರ ಚೆನ್ನಾಗಿ ಅಗಿದು ತಿಂದರೆ ಅಜೀರ್ಣ ರೋಗದಿಂದ ನಿವಾರಣೆ ಆಗುವುದು.
  • ಊಟ ಆದ ನಂತರ ಕೊಂಚ ಓಡಾಡುವ ಅಭ್ಯಾಸ ಮಾಡುವುದರಿಂದಲೂ ಅಜೀರ್ಣ ರೋಗದಿಂದ ದೂರ ಇರಬಹುದು.
  • ಮೆಣಸಿನಪುಡಿ ಮಾಡುವಾಗ ಸಾಕಷ್ಟು ಕರಿಬೇವಿನ ಸೊಪ್ಪನ್ನು ಬೆರೆಸಿ, ಪುಡಿ ಮಾಡುವುದರಿಂದ ಜೀರ್ಣಶಕ್ತಿ ಹೆಚ್ಚಾಗುವುದಲ್ಲದೆ ನಾಲಿಗೆಗೆ ರುಚಿ ಹೆಚ್ಚುವುದು.
  • ಮೋಸಂಬಿ ಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುವುದರ ಜೊತೆಗೆ ಹಸಿವು ವೃದ್ಧಿಸುವುದು.
  • ಪುದಿನಾ ಸೊಪ್ಪಿನಲ್ಲಿ ಚಹ ತಯಾರಿಸಿ ಬಳಸುವುದರಿಂದಲೂ ಅಜೀರ್ಣವ್ಯಾಧಿ ಗುಣ ಆಗುವುದು.
  • ನೇರಳೆಹಣ್ಣನ್ನು ತಿನ್ನುವುದರಿಂದ ಶರೀರದಲ್ಲಿ ಉಷ್ಣತೆ ಕಡಿಮೆ ಆಗುವುದರ ಜೊತೆಗೆ ಅಜೀರ್ಣ ದೂರವಾಗಿ, ಹಸಿವು ಹೆಚ್ಚುವುದು.
  • ಪುದಿನಾ ಸೊಪ್ಪಿನ ಚಟ್ಟಿಯನ್ನು ಬಳಸುವುದರಿಂದ ಜೀರ್ಣಶಕ್ತಿ ವೃದ್ಧಿಸುವುದು….