Kesari Bath Recipe kannada Recipe-ಕೇಸರಿಬಾತ್
Kesari Bath Recipe in kannada -ಕೇಸರಿಬಾತ್
ಕೇಸರಿ ಬಾತ್ ಮಾಡಲು ಬೇಕಾಗುವ ಪದಾರ್ಥ:
ಕಾಲು ಕೆ.ಜಿ, ಚಿರೋಟಿ ರವೆ, 100 ಗ್ರಾಂ ಸಕ್ಕರೆ, ಒಂದು ಕಪ್
ತುಪ್ಪ, ಗೋಡಂಬಿ ದ್ರಾಕ್ಷಿ 15ಗ್ರಾಂ, 1 ಟೀ ಸ್ಪೂನ್ ಕೇಸರಿ ಬಣ್ಣ, 1 ಟೀ
ಸ್ಪೂನ್ ಯಾಲಕ್ಕಿ ಪುಡಿ.
ಮಾಡುವ ವಿಧಾನ:
ಮೊದಲು ರವೆಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಗೋಡಂಬಿ
ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದುಕೊಂಡು ಇಟ್ಟುಕೊಳ್ಳಿ. ಆಮೇಲೆ ಒಂದು
ಸ್ಟೀಲ್ ಪಾತ್ರೆಯಲ್ಲಾಗಲಿ, ಬಾಣಲಿಯಲ್ಲಾಗಲಿ ರವೆ ಬೇಯುವಷ್ಟು
ನೀರಾರಿ ಒಲೆಯ ಮೇಲಿಡಿ. ನೀರು ಕುದ್ದ ನಂತರ ರವೆ ಹಾಕಿ, ರವೆ ಬೆಂದ
ಮೇಲೆ ಸಕ್ಕರೆ, ಗೋಡಂಬಿ-ದ್ರಾಕ್ಷಿ-ಕೇಸರಿ ಬಣ್ಣ, ಯಾಲಕ್ಕಿ ಪುಡಿ ಸೇರಿಸಿ
ಕೆಳಗಿಳಿಸಿ.