Mutton Biriyani Kannada -home-ಮಟನ್ ಬಿರಿಯಾನಿ ಕನ್ನಡ
Mutton Biriyani kannada -ಮನೆಯಲ್ಲಿ ಮಾಡಿ ಹೋಟೆಲ್ ತರಹ ಮಟನ್ ಬಿರಿಯಾನಿ ಕನ್ನಡ
ಮಟನ್ ಬಿರಿಯಾನಿಗೆ ಬೇಕಾಗುವ ಪದಾರ್ಥಗಳು -Ingredients Mutton Dum Biriyani Recipes in kannada
ಮಟನ್ | 1 ಕೆ.ಜಿ. |
ಈರುಳ್ಳಿ | 4 |
ಮೊಸರು | 1 ಬಟ್ಟಲು |
ಸಣ್ಣಕ್ಕಿ | 1/2 ಕೆ.ಜಿ. |
ಅಡುಗೆ ಎಣ್ಣೆ | ಬಟ್ಟಲು |
ಗರಂ ಮಸಾಲಾ | ಟೀ ಚಮಚ |
ಕೊತ್ತಂಬರಿಸೊಪ್ಪು | ಕಟ್ಟು |
ಉಪ್ಪು | ರುಚಿಗೆ ತಕ್ಕಸ್ಟು |
ಮಸಾಲೆಗೆ ಬೇಕಾಗುವ ಪದಾರ್ಥಗಳು :
ಹಸಿ ಮೆಣಸಿನಕಾಯಿ | 10 |
ಶುಂಟಿ | 2ಚುರು |
ಗೋಡಂಬಿ | 10 |
ಬೆಳ್ಳುಳ್ಳಿ | 1 |
ಈರುಳ್ಳಿ | 2 |
Mutton Biriyani Recipe
: ಮಾಡುವ ವಿಧಾನ:
ಮೊದಲು ಮಸಾಲೆಯ ಸಾಮಾನುಗಳನ್ನು ತೆಗೆದುಕೊಂಡು ಚೆನ್ನಾಗಿ
ರುಬ್ಬಿಕೊಳ್ಳಿ. ನಂತರ ಅದನ್ನು ಒಂದು ಬಟ್ಟಲಿನಲ್ಲಿ ಹಾಕಿ ತೆಗೆದಿಡಿ. ಅನಂತರ
ಶುದ್ಧವಾದ ನೀರಿನಿಂದ ಅಕ್ಕಿಯನ್ನು ತೊಳೆದು ಬೇಯುವಷ್ಟು ನೀರು ಹಾಕಿ
ಮುಕ್ಕಾಲು ಭಾಗ ಅಕ್ಕಿ ಬೆಂದ ನಂತರ ಕೆಳಗಿಳಿಸಿ. ಬಾಣಲೆಗೆ ಎಣ್ಣೆ ಹಾಕಿ
ಅದು ಕಾದ ನಂತರ ಸಣ್ಣಗೆ ಹೆಚ್ಚಿಟ್ಟುಕೊಂಡಿರುವ ಈರುಳ್ಳಿಯನ್ನು ಅದರಲ್ಲಿ
ಹಾಕಿ ಹದವಾಗಿ ಹುರಿಯಿರಿ. ನಂತರ ಅದಕ್ಕೆ ರುಬ್ಬಿಟ್ಟುಕೊಂಡಿರುವ ಮಸಾಲೆ,
ಗರಂ ಮಸಾಲೆಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕೂಡಿಸಿ,
ಅನಂತರ ಮಟನ್ ತುಂಡುಗಳನ್ನು ತೊಳೆದು ಹಾಕಿ ಚೆನ್ನಾಗಿ ಕೂಡಿಸಿ,
ಆಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಮೊಸರನ್ನು ಹಾಕಿ
ಮತ್ತೊಮ್ಮೆ ಕೂಡಿಸಿ ಬೇಯಿಸಿ. ಎಲ್ಲವೂ ಚೆನ್ನಾಗಿ ಬೆಂದ ನಂತರ ಕೆಳಗಿಳಿಸಿ.
ನಂತರ ಅದಕ್ಕೆ ಮುಕ್ಕಾಲು ಭಾಗ ಬೆಂದ ಅನ್ನವನ್ನು ಹಾಕಿ ಮಗಚುವ
ಕೈಯಿಂದ ಚೆನ್ನಾಗಿ ಕೂಡಿಸಿ ಪುನಃ ಒಲೆಯ ಮೇಲಿಟ್ಟು ಬೇಯಿಸಿ. ಎಲ್ಲಾ
ಹದವಾಗಿ ಬೆಂದ ನಂತರ ಕೆಳಗಿಳಿಸಿ. ಈರುಳ್ಳಿಯ ಚೂರುಗಳನ್ನು ಎಣ್ಣೆಯಲ್ಲಿ
ಕೆಂಪಗೆ ಹುರಿದು ಅದರ ಮೇಲೆ ಹರಡಿ. ಮತ್ತೊಮ್ಮೆ ಮಗಚುವ ಕೈಯಿಂದ
ಕೂಡಿಸಿ ಉಪಯೋಗಿಸಿ, ರುಚಿಯಾದ ಮಟನ್ ಬಿರಿಯಾನಿ ಎಲ್ಲರಿಗೂ
ತೃಪ್ತಿ ನೀಡುತ್ತದೆ.
