Mutton Pulao Biryani Kannada ಮಟನ್ ಪಲಾವ್ ಬಿರಿಯಾನಿ

Mutton Pulao Biriyani kannada  -ಮನೆಯಲ್ಲಿ ಮಾಡಿ ಹೋಟೆಲ್ ತರಹ ಮಟನ್ ಪಲಾವ್ ಬಿರಿಯಾನಿ ಕನ್ನಡ 

Mutton-Pulao-kannada



ಮಟನ್ ಪಲಾವ್ ಬಿರಿಯಾನಿಗೆ ಬೇಕಾಗುವ ಪದಾರ್ಥಗಳು -Ingredients Mutton Pulao Biriyani Recipes in kannada

ಮಟನ್ಒಂದು KG
ಅಕ್ಕಿಒಂದು KG
ಗೋಡಂಬಿಹದಿನೈದು
ತುಪ್ಪಬಟ್ಟಲು
ಈರುಳ್ಳಿಐದು
ಏಲಕ್ಕಿಆರು
ಲವಂಗಹನ್ನೆರಡು
ಮೆಣಸುಹನ್ನೆರಡು
ಕೊತ್ತಂಬರಿಸೊಪ್ಪು ಕಂತೆಒಂದು ಕಂತೆ
ಶುಂಠಿಒಂದು ಚೂರು
ಬೆಳ್ಳುಳ್ಳಿಒಂದು
ಮೆಣಸಿನಕಾಯಿಎಂಟು
ಉಪ್ಪುರುಚಿಗೆತಕ್ಕಷ್ಟು

 


 

ಮಸಾಲೆಗೆ ಬೇಕಾಗುವ ಪದಾರ್ಥಗಳು : ಎಲ್ಲವನ್ನು ರುಬ್ಬಿಕೊಳ್ಳಿ

ಬೆಳ್ಳುಳ್ಳಿಒಂದು ಸುಲಿದಿರುವದು
ಶುಂಠಿಒಂದು ಚೂರು
ದಾಲ್ಚಿನಿಎರಡು ಅಂಗುಲ ಚೂರು
ಲವಂಗಹತ್ತು
ಮೆಣಸುಹತ್ತು
ಏಲಕ್ಕಿಐದು
ದನಿಯ ಪುಡಿಒಂದು ಟೀ ಚಮಚ
ಹಸಿರುಮೆಣಸಿನಕಾಯಿಐದು
ಗಸಗಸೆಒಂದು ಟೀ ಚಮಚ

ಮಟನ್ ಪಲಾವ್ ಮಾಡುವ ವಿಧಾನ:Mutton Pulao Recipe 

ಮೊದಲು ಅಕ್ಕಿಯನ್ನು ಶುದ್ಧವಾದ ನೀರಿನಿಂದ ತೊಳೆದು ನೀರು
ಬಸಿದಿಟ್ಟುಕೊಳ್ಳಿ. ನಂತರ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ, ಅನಂತರ
ಮಸಾಲೆಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಒಂದು ಶುಭ್ರವಾದ
ಬಟ್ಟೆಯಿಂದ ಹಾಕಿ ಗಂಟು ಕಟ್ಟಿ ಇಟ್ಟುಕೊಳ್ಳಿ.

ಈಗ ಮಟನನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ನೀರಿನಿಂದ
ತೊಳೆದು ನಂತರ ಸ್ವಲ್ಪ ನೀರು ಹಾಕಿ ಬೇಯಿಸಿ. ಮಟನ್‌ ಬೆಂದ ಮೇಲೆ,

 ಬಟ್ಟೆಯಲ್ಲಿ  ಮಸಾಲೆ  ಕಟ್ಟಿ ಸಾಮಾನುಗಳನ್ನು ಗಂಟು ಸಮೇತ ಆ
ಪಾತ್ರೆಯಲ್ಲಿ ಹಾಕಿ ಹದಿನೈದು ನಿಮಿಷ ಕಾಲ ಬೇಯಿಸಿ, ಕೆಳಗಿಳಿಸಿ ಆರಿದ
ನಂತರ ಬಟ್ಟೆಯ ಗಂಟನ್ನು ಚೆನ್ನಾಗಿ ಹಿಂಡಿ ಬಟ್ಟೆಯನ್ನು ತೆಗೆದು ಬಿಸಾಡಿ.

ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ, ಅದರಲ್ಲಿ
ಲವಂಗ, ಮೆಣಸು ಮತ್ತು ದಾನ್ನಿಯನ್ನು ಹಾಕಿ ಹುರಿಯಿರಿ. ಅದಕ್ಕೆ
ಹೆಚ್ಚಿಟ್ಟುಕೊಂಡಿರುವ ಬೆಳ್ಳುಳ್ಳಿ, ಶುಂಠಿ ಮತ್ತು ಹಸಿರು ಮೆಣಸಿನಕಾಯಿ
ಉದ್ದಕ್ಕೆ ಸೀಳಿದ್ದು ಹಾಕಿ ಚೆನ್ನಾಗಿ ಕೂಡಿಸಿ.

ಕೆಲವು ನಿಮಿಷಗಳ ನಂತರ ಅದಕ್ಕೆ ಬೆಂದಿರುವ ಮಟನ್ ಚೂರುಗಳು,
ತೊಳೆದಿಟ್ಟುಕೊಂಡಿರುವ ಅಕ್ಕಿ, ಹಿಂಡಿದ ಮಸಾಲೆ ಮತ್ತು ರುಚಿಗೆ ತಕ್ಕಷ್ಟು
ಉಪ್ಪು ಹಾಕಿ ಕೂಡಿಸಿ ಬೇಕಾದಷ್ಟು ನೀರು ಹಾಕಿ, ಕೊತ್ತಂಬರಿ ಸೊಪ್ಪನ್ನು
ಸಣ್ಣಗೆ ಹಚ್ಚಿ ಅದರಲ್ಲಿ ಹಾಕಿ ತಟ್ಟೆ ಮುಚ್ಚಿ ಬೇಯಿಸಿ. ಅಕ್ಕಿ ಬೆಂದಮೇಲೆ
ಮಗಚುವ ಕೈಯಿಂದ ಚೆನ್ನಾಗಿ ಕೂಡಿಸಿ. ಅನಂತರ ಅಪ್ಪಟ ಕೇಸರಿ ದಳಗಳನ್ನು
ಬಿಸಿಯಾದ ಹಾಲಿನಲ್ಲಿ ಕರಗಿಸಿ ಪಲಾವ್ ಮೇಲೆ ಸಿಂಪಡಿಸಿ ಬೆಂದಿರುವ
ಮಟನ್ ಚೂರುಗಳ ಮೇಲೆ ಸ್ವಲ್ಪ ಸ್ವಲ್ಪ ತುಪ್ಪ ಹಾಕಿ ಮತ್ತೊಮ್ಮೆ ಕೂಡಿಸಿ.
ಈಗ ರುಚಿಕರವಾದ ಮಟನ್ ಪಲಾವ್ ಸಿದ್ದವಾಗುತ್ತದೆ.

 

Mutton Biriyani Kannada -home-ಮಟನ್ ಬಿರಿಯಾನಿ ಕನ್ನಡ

mutton biriyani kannada
mutton biriyani

 

kannada-whatsapp-status-images
kannada-whatsapp-status-images